/ CM

ತುಮಕೂರು ಜಿಲ್ಲೆಗೆ ರಾಜ್ಯ ಸರ್ಕಾರದ ಕೊಡುಗೆಗಳು

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ತುಮಕೂರು ಜಿಲ್ಲೆಯು ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದ್ದು ಜಿಲ್ಲೆಗಾಗಿ ಈ ಕೆಳಕಾಣಿಸಿದಂತೆ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗಿದೆ.

 1. ಹೇಮಾವತಿ ಜಲಾಶಯದಿಂದ ಜಿಲ್ಲೆಗೆ ಹಂಚಿಕೆಯಾಗಿದ್ದ 24.83 ಟಿ.ಎಂ.ಸಿ. ನೀರನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಹೇಮಾವತಿ ಎಡದಂಡೆ ನಾಲೆ 0-73 ರ ಅಗಲೀಕರಣ ಕಾಮಗಾರಿಯನ್ನು 562.00 ಕೋಟಿ ರೂ. ಗಳ ವೆಚ್ಚದಲ್ಲಿ ಕೈಗೊಂಡಿದ್ದು ಇದರಿಂದ ಜಿಲ್ಲೆಯ ಎಲ್ಲಾ ಭಾಗದ ಜನ ಸಾಮಾನ್ಯರು ಮತ್ತು ಜಾನುವಾರಗಳಿಗೆ ಕುಡಿಯಲು ಹಾಗೂ ಕೆರೆಕುಂಟೆಗಳಿಗೆ ನೀರು ಹರಿಸಲಾಗಿದೆ.
 2. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‍ನಲ್ಲಿ 615 ಎಕರೆ ಪ್ರದೇಶದಲ್ಲಿ ಹೆಚ್‍.ಎ.ಎಲ್. ಹೆಲಿಕಾಪ್ಟರ್ ತಯಾರಿಕ ಘಟಕವು ನಿರ್ಮಾಣವಾಗುತ್ತಿದ್ದು ಕರ್ನಾಟಕ ಸರ್ಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದಂತೆ 4 ಸಾವಿರ ಕೋಟಿ ರೂ ಬಂಡವಾಳವನ್ನು ಹೆಚ್‍ಎಎಲ್ ಸಂಸ್ಥೆಯು ಹೂಡಿಕೆ ಮಾಡಲಿದೆ. ಇದರಿಂದ 4 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಠಿಯಾಗಲಿವೆ.
 3. ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಕೆರೆಯಿಂದ ಹೇಮಾವತಿ ನೀರನ್ನು ಮದಲೂರು ಕೆರೆಗೆ ನೀರು ಹರಿಸುವ 32 ಕಿ.ಮೀ. ಉದ್ದ ನಾಲೆಯನ್ನು 5985.07 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದರಿಂದ ನಾಲೆಯುದ್ದಕ್ಕೂ ಸಿಗುವ 11 ಕೆರೆಗಳಿಗೆ ನೀರು ಲಭ್ಯವಾಗಿದೆ.
 4. ಜಿಲ್ಲೆಯಲ್ಲಿರುವ ವಸಂತನರಸಾಪುರ ಕೈಗಾರಿಕಾ ಪ್ರದೇಶ 1 ರಿಂದ 6 ನೇ ಹಂತದವರೆಗೆ ಇರುವ ಪ್ರದೇಶವನ್ನು ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಹೂಡಿಕೆ ಮತ್ತು ತಯಾರಿಕಾ ವಲಯ (National Investment And Manufacturing Zone at Tumkur) (NI &MZ) ಎಂದು ಗುರುತಿಸಲಾಗಿದೆ. ಈ ಕೈಗಾರಿಕಾ ಪ್ರದೇಶದಲ್ಲಿ 1614 ಕೋಟಿ ಬಂಡವಾಳ ಹೂಡಿಕೆಯಾಗಿದ್ದು, ಇಲ್ಲಿನ ಫುಡ್‍ಪಾರ್ಕ್ ದೇಶದ ಗಮನ ಸೆಳೆದಿದೆ.

Tumkur-1

 1. ತುಮಕೂರು ಜಿಲ್ಲೆಯ ಬರ ಪ್ರದೇಶವಾದ ಪಾವಗಡ ತಾಲ್ಲೂಕಿನಲ್ಲಿ ವಿಶ್ವದ ಅತಿದೊಡ್ಡ 2000 ಮೆಗಾವ್ಯಾಟ್ ಸಾಮಥ್ರ್ಯದ ಸೌರಪಾರ್ಕ್ ಅನ್ನು ಸುಮಾರು 13,000 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. ಸುಮಾರು 2000 ರೈತರು ಪ್ರತಿ ವರ್ಷ 25 ಕೋಟಿ ರೂ.ಗಳಷ್ಟು ಗುತ್ತಿಗೆ ಹಣವನ್ನು ಪಡೆಯಲಿದ್ದಾರೆ.
 2. ಕೊರಟಗೆರೆ ತಾಲೂಕಿನ ತುಂಬಗಾನಹಳ್ಳಿ ಬಳಿ 42 ಎಕರೆ ಪ್ರದೇಶದಲ್ಲಿ ಕೆ.ಎಸ್‍.ಆರ್‍.ಪಿ. ಪಡೆಯ ತರಬೇತಿ ಶಾಲೆಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಜಿಲ್ಲೆಯಲ್ಲಿ 425 ಪೊಲೀಸ್ ಕಾನ್‍ಸ್ಟೇಬಲ್ ಹಾಗೂ 80 ಮಹಿಳಾ ಪೊಲೀಸ್ ಕಾನ್‍ಸ್ಟೇಬಲ್‍ಗಳ ನೇಮಕಕ್ಕೆ ಹಾಗೂ ಪೊಲೀಸ್ ಠಾಣೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ.
 3. ಕಳೆದ ಮೂರ್ನಾಲ್ಕು ವರ್ಷಗಳಿಂದ ಬರದಿಂದಾಗಿ ಜಿಲ್ಲೆಯ ರೈತರು ಸಂಕಷ್ಠದಲ್ಲಿದ್ದರು. ಸರ್ಕಾರದ ಸಾಲಮನ್ನಾ ಯೋಜನೆಯಿಂದಾಗಿ ಜಿಲ್ಲೆಯಲ್ಲಿ 109888 ರೈತರಿಗೆ 371.42 ಕೋಟಿ ರೂಪಾಯಿಗಳ ಸಾಲಮನ್ನಾ ಸೌಲಭ್ಯ ದೊರೆತಿದ್ದು ರೈತರಿಗೆ ನೆಮ್ಮದಿ ಸಿಕ್ಕಿದೆ.
 4. “ಅನ್ನಭಾಗ್ಯ” ಯೋಜನೆಯಡಿ ಜಿಲ್ಲೆಯಲ್ಲಿ 5,41,042 ಬಿಪಿಎಲ್ ಕುಟುಂಬಗಳು ಹಾಗೂ 30,031 ಅಂತ್ಯೋದಯ ಕಾರ್ಡ್‍ದಾರರಿಗೆ ಉಚಿತವಾಗಿ ಅಕ್ಕಿ ವಿತರಿಸಲಾಗುತ್ತಿದೆ.
 5. ತುಮಕೂರು ತಾಲ್ಲೂಕಿನ ದಿಬ್ಬೂರಿನಲ್ಲಿ ಒಂದೆಡೆ 1200 ಮನೆಗಳನ್ನು ನಿರ್ಮಿಸಿ ಕೊಳಗೇರಿ ನಿವಾಸಿಗಳಿಗೆ ಹಾಗೂ ಸ್ವಂತ ಸೂರನ್ನು ಒದಗಿಸಲಾಗಿದೆ.

Tumkur-INCK

 1. ತುಮಕೂರು-ರಾಯದುರ್ಗ ರೈಲ್ವೆ ಯೋಜನೆಯು ತುಮಕೂರು-ಕೊರಟಗೆರೆ-ಮಧುಗಿರಿ-ಪಾವಗಡ ಹಾಗೂ ಆಂಧ್ರಪ್ರದೇಶದ ಅನಂತಪುರಜಿಲ್ಲೆಯ ಮಡಕಶಿರಾ-ಕಲ್ಯಾಣದುರ್ಗ-ರಾಯದುರ್ಗ ತಾಲ್ಲೂಕುಗಳ ಮೂಲಕ ಹಾದು ಹೋಗುವ ರೈಲ್ವೆ ಯೋಜನೆಯಾಗಿದ್ದು, ಇದಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು ಭೂಸ್ವಾಧೀನ ವೆಚ್ಚ ಹಾಗೂ ರೈಲ್ವೆ ಕಾಮಗಾರಿ ವೆಚ್ಚ ಎರಡರಲ್ಲೂ ಶೇ.50:50ರಷ್ಟು ಅನುದಾನವನ್ನು ಭರಿಸಲಿದೆ.
 2. ಕರ್ನಾಟಕ ರಾಜ್ಯ ಸರ್ಕಾರವು ಈ ಯೋಜನೆಗೆ ಇದುವರೆಗೆ 68.98 ಕೋಟಿ ರೂ.ಗಳನ್ನು ಭೂಸ್ವಾಧೀನ ವೆಚ್ಚಕ್ಕಾಗಿ ಬಿಡುಗಡೆ ಮಾಡಿರುತ್ತದೆ. ತುಮಕೂರು ಜಿಲ್ಲೆಯಲ್ಲಿ ಈ ರೈಲ್ವೆಯೋಜನೆಯ ಉದ್ದ 58.69 ಕಿ.ಮೀ. ತುಮಕೂರು-ದಾವಣಗೆರೆ ರೈಲ್ವೆ ಯೋಜನೆಯ ಒಟ್ಟು ವೆಚ್ಚ ಅಂದಾಜು 1800 ಕೋಟಿ ರೂ.ಗಳಾಗಿರುತ್ತದೆ.

T

 1. ಭದ್ರಾ ಮೇಲ್ದಂಡೆ ಯೋಜಣೆಯಡಿ ಕೃಷ್ಣಾ ಕಣಿವೆಯ ಸ್ಕಿಂ ಎ ಮತ್ತು ಸ್ಕಿಂ ಬಿ ನ ಸದ್ಭಳಕೆ ಮಾಡುವ ದೃಷ್ಟಿಯಿಂದ ಒಟ್ಟು 29.90 ಟಿ.ಎಂ.ಸಿ. ನೀರಿನ ಬಳಕೆಗೆ ಅಂದಾಜು ರೂ. 12,340.00 ಕೋಟಿಗಳ ಭದ್ರಾ ಮೇಲ್ದಂಡೆ ಪರಿಷ್ಕøತ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು ಈಗಾಗಲೇ ಈ ಕಾರ್ಯವು ಪ್ರಗತಿಯಲ್ಲಿದೆ.

#NavaKarnatakaNirmana

ಈ ವೀಡಿಯೋ ವೀಕ್ಷಿಸಿ

WhatsApp-Image-2017-12-28-at-12.17.22-PM

WhatsApp-Image-2017-12-28-at-12.17.26-PM--1-

WhatsApp-Image-2017-12-28-at-12.17.21-PM

WhatsApp-Image-2017-12-28-at-12.17.23-PM

WhatsApp-Image-2017-12-28-at-12.17.24-PM

WhatsApp-Image-2017-12-28-at-12.17.25-PM

Please click here to see Taluk Wise Development Data

ಈ ವೀಡಿಯೋ ವೀಕ್ಷಿಸಿ