/ CM

ವಿಜಯಪುರ ಜಿಲ್ಲೆಗೆ ರಾಜ್ಯ ಸರ್ಕಾರದ ಕೊಡುಗೆಗಳು

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ವಿಜಯಪುರ ಜಿಲ್ಲೆಯು ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದ್ದು ಜಿಲ್ಲೆಗಾಗಿ ಈ ಕೆಳಕಾಣಿಸಿದಂತೆ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗಿದೆ.

 1. ವಿಜಯಪುರ ಜಿಲ್ಲೆಯ 15 ಲಕ್ಷ ಎಕರೆ ಜಮೀನಿಗೆ ಒಟ್ಟು 13,769.70 ಕೋಟಿ ರೂ. ನೀರಾವರಿ ಸೌಲಭ್ಯ ನಿಗಿದಿಪಡಿಸಲಾಗಿದೆ.
 2. ಮುಳವಾಡ ಏತ ನೀರಾವರಿ ಯೋಜನೆಗೆ 5,398.55 ಕೋಟಿ ರೂ. ವ್ಯಯಿಸಿದ್ದು ಒಟ್ಟು 54.431 ಟಿ.ಎಂ.ಸಿ. ಯೋಜಿತ ನೀರನ್ನು ಬಳಕೆ ಮಾಡಲಾಗುತ್ತಿದೆ.
 3. ಜಿಲ್ಲೆಯಲ್ಲಿ ಒಟ್ಟು 203 ಕೆರೆಗಳನ್ನು 197 ಕೋಟಿ ರೂ. ವೆಚ್ಚದಲ್ಲಿ ಭರ್ತಿ ಮಾಡಲಾಗಿದ್ದು, ಐತಿಹಾಸಿಕ 25 ಬಾವಿಗಳ ಪುನಶ್ಚೇತನವಾಗಿದೆ.
 4. ಕೃಷಿಭಾಗ್ಯ ಯೋಜನೆಯಡಿ 16,066 ಕೃಷಿ ಹೊಂಡ, 61 ಪಾಲಿಹೌಸಗಳ ನಿರ್ಮಾಣ. 16,127 ಫಲಾನುಭವಿಗಳಿಗೆ ಒಟ್ಟು 17,230.87 ಲಕ್ಷ ರೂ. ಅನುದಾನ ವೆಚ್ಚ ಭರಿಸಲಾಗಿದೆ.
 5. ಸೂಕ್ಷ್ಮ ನೀರಾವರಿ ಯೋಜನೆಯಡಿ 42,883 ಹೆಕ್ಟೇರ್ ಪ್ರದೇಶದಲ್ಲಿ ಹನಿ ಮತ್ತು ತುಂತುರು ನೀರಾವರಿ ಘಟಕ ಅಳವಡಿಕೆ - 41,016 ರೈತರಿಗೆ ಪ್ರಯೋಜನ.
 6. 7 ಹೋಬಳಿ ಕೇಂದ್ರಗಳಲ್ಲಿ ಕೃಷಿ ಯಂತ್ರಧಾರೆ ಯೋಜನೆ ಚಾಲನೆಯಲ್ಲಿದ್ದು 3,742 ರೈತರಿಗೆ ಯಂತ್ರೋಪಕರಣಗಳನ್ನು ಕಡಿಮೆ ದರದಲ್ಲಿ ಬಾಡಿಗೆಗೆ ನೀಡಲಾಗಿದೆ.
 7. ಜಿಲ್ಲೆಯ 1,84,452 ರೈತರ 50 ಸಾವಿರ ರೂ.ವರೆಗಿನ 68,547.98 ಲಕ್ಷ ರೂ. ಅಲ್ಪಾವಧಿ ಸಾಲ ಮನ್ನಾ ಮಾಡಲಾಗಿದೆ.

Vijayapura_Gok

 1. ಪಶು ಭಾಗ್ಯ ಯೋಜನೆಯಡಿ ಪಶುಸಂಗೋಪನೆ ಜತೆಗೆ ಆಡು, ಕುರಿ ಸಾಕಣೆಗಾಗಿ 1,705 ರೈತರಿಗೆ 377.255 ಲಕ್ಷ ರೂ. ಸಹಾಯಧನ ವಿತರಣೆ.
 2. ಕ್ಷೀರಧಾರೆಯಡಿ ಜಿಲ್ಲೆಯ 19,999 ಫಲಾನುಭವಿಗಳಿಗೆ 1,354.38 ಲಕ್ಷ ರೂ. ಗಳ ಪ್ರೋತ್ಸಾಹ ಧನವನ್ನು ಉತ್ಪಾದಕರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ.
 3. ಕ್ಷೀರಭಾಗ್ಯ ಯೋಜನೆಯಡಿ ಜಿಲ್ಲೆಯ 19,17,192 ಮಕ್ಕಳಿಗೆ 2,151.529 ಮೆಟ್ರಿಕ್ ಟನ್ ಹಾಲು ವಿತರಣೆಗೆ ವ್ಯಯಿಸಲಾದ ಹಣ ಒಟ್ಟು ರೂ. 69,09,23,061.
 4. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 3,42,313 ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ಮತ್ತು ನೋಟ್ ಪುಸ್ತಕ ವಿತರಣೆ.
 5. ರೂ. 258 ಕೋಟಿ ವೆಚ್ಚದಲ್ಲಿ 4,17,908 ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆ ಒದಗಿಸಲಾಗಿದ್ದು - ಫಲಾನುಭವಿಗಳ ಸಂಖ್ಯೆ 13,70,629.
 6. ಮಾತೃಪೂರ್ಣ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟವನ್ನು 26,797 ಗರ್ಭಿಣಿಯರು, 27,015 ಬಾಣಂತಿಯರು ಸೇರಿದಂತೆ ಒಟ್ಟು 53,812 ಫಲಾನುಭವಿಗಳಿಗೆ ನೀಡಲಾಗುತ್ತಿದೆ.
 7. ಗಂಗಾ ಕಲ್ಯಾಣ ಯೋಜನೆಯಡಿ 884 ಕೊರೆದ ಕೊಳವೆ ಬಾವಿಗಳಿಗೆ 707 ವಿದ್ಯುದ್ಧೀಕರಣಗೊಳಿಸಿ 650 ಪಂಪಸೆಟ್‍ಗಳನ್ನು ವಿತರಿಸಲಾಗಿದೆ.
 8. ವಿದ್ಯಾಸಿರಿ ಯೋಜನೆಯಡಿ 54,017 ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಸಹಾಯ ಯೋಜನೆಯಡಿಯಲ್ಲಿ 3,808.49 ಲಕ್ಷ ರೂ.ಗಳ ವೆಚ್ಚ ಭರಿಸಲಾಗಿದೆ.

Vijayapura

 1. ಬಿದಾಯಿ ಯೋಜನೆಯಡಿ ಅಲ್ಪಸಂಖ್ಯಾತ ವಧುವಿನ ವಿವಾಹಕ್ಕಾಗಿ ತಲಾ ರೂ.50,000/- ರಂತೆ 2,373 ಹೆಣ್ಣುಮಕ್ಕಳಿಗೆ ಒಟ್ಟು ರೂ.1,186.00 ಲಕ್ಷ ಹಣವನ್ನು ನೇರ ಅವರ ಖಾತೆಗೆ ಜಮೆ ಮಾಡಲಾಗಿದೆ.
 2. ವಿಜಯಪುರ ಜಿಲ್ಲೆಯ ಒಟ್ಟು 1,049 ಜನವಸತಿಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗಿದೆ.
 3. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ರೂ.20,618.75 ಲಕ್ಷ ವೆಚ್ಚದಲ್ಲಿ ಒಟ್ಟು 410.36 ಕಿಮೀ ಉದ್ದದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ.

Vijayapura-1

 1. ನಿರಂತರ ಜ್ಯೋತಿ ಯೋಜನೆಯಡಿ 1086 ಗ್ರಾಮ, ತಾಂಡಾ, ವಸತಿಗಳಿಗೆ ನಿರಂತರ ವಿದ್ಯುತ್ ಪೂರೈಸಲು 141.63 ಕೋಟಿ ರೂ. ವೆಚ್ಚದಲ್ಲಿ 98 ವಿದ್ಯುತ್ ಮಾರ್ಗಗಳ ನಿರ್ಮಾಣ.
 2. ರಾಷ್ಟ್ರ ಮತ್ತು ಅಂತರ್‍ರಾಷ್ಟ್ರೀಯ ಖ್ಯಾತಿಯ ಸೈಕ್ಲಿಸ್ಟ್‍ಗಳ ಅನುಕೂಲಕ್ಕಾಗಿ 730 ಲಕ್ಷ ರೂ. ವೆಚ್ಚದಲ್ಲಿ ಜಿಲ್ಲಾ ಸೈಕ್ಲಿಂಗ್ ವೆಲೋಡ್ರೋಮ್ ಕಾಮಗಾರಿ ಪ್ರಗತಿಯಲ್ಲಿದೆ.

#NavaKarnatakaNirmana

WhatsApp-Image-2017-12-20-at-3.33.03-PM

WhatsApp-Image-2017-12-20-at-3.33.05-PM--1-

WhatsApp-Image-2017-12-20-at-3.33.06-PM--1-

WhatsApp-Image-2017-12-20-at-3.33.06-PM

WhatsApp-Image-2017-12-20-at-3.33.07-PM--1-

WhatsApp-Image-2017-12-20-at-3.33.09-PM

Please click here to see Taluk Wise Development Data

ಈ ವೀಡಿಯೋ ವೀಕ್ಷಿಸಿ