/ water resources

ಜಲ ಸಂಪನ್ಮೂಲ ಇಲಾಖೆ

“ರಾಜ್ಯದ ಅಮೂಲ್ಯ ಸಂಪನ್ಮೂಲವಾಗಿರುವ ನೀರನ್ನು ರಾಜ್ಯದ ಅಭಿವೃದ್ಧಿಗೆ ಸೂಕ್ತವಾಗಿ ಬಳಸಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ. ಮುಂದಿನ ಐದು ವರ್ಷಗಳಲ್ಲಿ ನೀರಾವರಿ ಕ್ಷೇತ್ರದ ಅಭಿವೃದ್ಧಿಗಾಗಿ 50,000 ಕೋಟಿ ರೂಪಾಯಿಗಳನ್ನು ನೀಡಲಾಗುವುದು”.
– ಮುಖ್ಯಮಂತ್ರಿ ಸಿದ್ದರಾಮಯ್ಯ (2013-14 ಬಜೆಟ್ ಘೋಷಣೆ ಸಂದರ್ಭದಲ್ಲಿ ಆಡಿದ ಮಾತು)

ಜನರಿಗೆ ನೀಡಲಾದ ಭರವಸೆಯೆಂತೆ ಸಚಿವರಾದ ಶ್ರೀ.ಎಂ.ಬಿ.ಪಾಟೀಲ್ ಅವರ ಸಮರ್ಥ ನಾಯಕತ್ವದಲ್ಲಿ ದಾಖಲೆ ಮಟ್ಟದಲ್ಲಿ ನೀರಾವರಿ ಯೋಜನೆಗಳನ್ನು ಕೈಗೊಳ್ಳಲಾಗಿದ್ದು ಒಟ್ಟು 48,096 ಕೋಟಿ ರೂಪಾಯಿಗಳ ವೆಚ್ಚದಲ್ಲಿ 6.2 ಲಕ್ಷ ಎಕರೆಗಳಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಲಾಗಿದ್ದು ಈಗಾಗಲೇ 4.4 ಲಕ್ಷ ಎಕರೆಗಳಲ್ಲಿ 50 ಲಕ್ಷಕ್ಕೂ ಹೆಚ್ಚಿನ ರೈತರು ನೀರಾವರಿ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. 2017-18 ನೇ ಸಾಲಿನಲ್ಲಿ 68,264 ಜನ ರೈತರಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಲಾಗಿದ್ದು ನಮ್ಮ ಸರ್ಕಾರವು “ನುಡಿದಂತೆ ನಡೆಯುವ ಸರ್ಕಾರವಾಗಿದೆ”.

ಕೃಷಿ ಕ್ಷೇತ್ರದ ಉತ್ಪಾದನೆಯಲ್ಲಿ ನೀರಾವರಿಯು ಒಂದು ಪ್ರಮುಖ ಸಂಪನ್ಮೂಲವಾಗಿದ್ದು ರಾಜ್ಯದಲ್ಲಿ ಅಂತರ್ಜಲ ಮತ್ತು ಭೂಮೇಲ್ಮೈ ಜಲ ಮೂಲಗಳನ್ನು ಹೆಚ್ಚಿಸಿ ಬೆಳೆಗಳನ್ನು ಬೆಳೇಯಲು ಇದು ಅನುಕೂಲಕಾರಿಯಾಗಿದೆ. ಸರ್ಕಾರದ ಹಿತಾಸಕ್ತಿಯಿಂದ ಒಟ್ಟು ನೀರಾವರಿ ಕ್ಷೇತ್ರವು 1980-81ರಲ್ಲಿ 13.62 ಲಕ್ಷ ಹೆಕ್ಟೇರಿನಿಂದ 2014-15ಕ್ಕೆ 35.89 ಲಕ್ಷ ಹೆಕ್ಟೇರ್’ಗೆ ಗಣನೀಯ ಏರಿಕೆಯಾಗಿದೆ. ಇದೇ ರೀತಿ ಒಟ್ಟು ನೀರಾವರಿ ಕ್ಷೇತ್ರವು 1980-81ರಲ್ಲಿದ್ದ 16.76 ಲಕ್ಷ ಹೆಕ್ಟೇರ್’ನಿಂದ 2014-15ಕ್ಕೆ 41.86 ಲಕ್ಷ ಹೆಕ್ಟೇರ್’ಗೆ ಏರಿಕೆಯಾಗಿದೆ. ರಾಜ್ಯದ ಒಟ್ಟು ಬೆಳೆ ಕ್ಷೇತ್ರದಲ್ಲಿ (122.47 ಲಕ್ಷ ಹೆಕ್ಟೇರ್) ನೀರಾವರಿ ಕ್ಷೇತ್ರವು 1980-81 ರಲ್ಲಿದ್ದ ಶೇ.16ರಿಂದ 2014-15ರಲ್ಲಿ ಶೇ.34 ರಷ್ಟಾಗಿ ದ್ವಿಗುಣವಾಗಿದೆ.

21167282_916161218537277_2066636145800024069_o

ಸದ್ಯ ನೀರಾವರಿ ಇಲಾಖೆಯಿಂದ ಈ ಕೆಳಕಂಡ ಸಾಧನೆಗಳನ್ನು ಗಮನಿಸಬಹುದಾಗಿದೆ:

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3
ಕೃಷ್ಣಾ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ 2ನೇ ನ್ಯಾಯಾಲಯದ ತೀರ್ಪಿನಿಂದಾಗಿ ರಾಜ್ಯಕ್ಕೆ ಹೆಚ್ಚುವರಿಗೆ ದೊರೆತ 130 ಟಿಎಂಸಿ ನೀರನ್ನು ಸಮರ್ಥವಾಗಿ ಬಳಸಿಕೊಳ್ಳುವ ಸಲುವಾಗಿ ವಿಜಯಪುರ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳಲ್ಲಿ ನೀರಾವರಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಮುಳವಾಡ, ಇಂಡಿ, ಚಿಮ್ಮಲಗಿ, ಕೊಪ್ಪಳ ಮತ್ತು ಹೆರ್ಕಾಲ್ ನಲ್ಲಿ ಏತನೀರಾವರಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರಡಿಯಲ್ಲಿ 437 ಕಿಲೋಮೀಟರ್ ಉದ್ದದ್ದಷ್ಟು ದೊಡ್ಡ ಪ್ರಮಾಣದ ಕಾಲುವೆಗಳ ಐದು ಪ್ರಮುಖ ನೀರಾವರಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇದರಿಂದ 1,47,464 ಎಕರೆ ಭೂಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕುತ್ತಿದ್ದು ಈ ಮಹತ್ತರ ಯೋಜನೆಗಾಗಿ 6,200 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ.

ಅಣೆಕಟ್ಟುಗಳ ಪುಜರುಜ್ಜೀವನ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳು (ಡ್ರಿಪ್)
ಕರ್ನಾಟಕ ಸರ್ಕಾರವು ಕೇಂದ್ರ ಜಲ ಆಯೋಗ ಮತ್ತು ವಿಶ್ವ ಬ್ಯಾಂಕ್ ಸಹಕಾರದೊಂದಿಗೆ 276.75 ಕೋಟಿ ರೂಪಾಯಿಗಳ ವೆಚ್ಚದಲ್ಲಿ 27 ಪ್ರಮುಖ ಅಣೆಕಟ್ಟುಗಳ ದುರಸ್ತಿ ಮತ್ತು ಪುನರುಜ್ಜೀವನ ಕಾಮಗಾರಿಯನ್ನು ಕೈಗೊಂಡಿದೆ. ಲಕ್ಷಾಂತರ ಎಕರೆ ಕೃಷಿ ಭೂಮಿಗೆ ನೀರನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿರುವ ಕೃಷ್ಣರಾಜಸಾಗರ (ಕೆ.ಆರ್.ಎಸ್) ದುರಸ್ತಿ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದೆ. ಇಷ್ಟೇ ಅಲ್ಲದೇ ಆಲಮಟ್ಟಿ ಜಲಾಶಯದ ದುರಸ್ತಿಗಾಗಿ ವಿಶ್ವಬ್ಯಾಂಕ್ ನಿಂದ “ಅವಾರ್ಡ್ ಆಫ್ ಎಕ್ಸಲೆನ್ಸಿ” ಪ್ರಶಸ್ತಿಯು ದೊರೆತಿರುತ್ತದೆ. ನಾರಾಯಣಪುರ ಮತ್ತು ಕೆಆರ್ ಎಸ್ ಜಲಾಶಯಗಳಿಗೆ “ಸರ್ಟಿಫಿಕೇಟ್ ಆಫ್ ಎಕ್ಸಲೆನ್ಸಿ” ಪ್ರಶಸ್ತಿಯು ಪ್ರದಾನವಾಗಿರುತ್ತದೆ.

DSC_3374

ರಾಮತಾಳ್ ಹನಿ ನೀರಾವರಿ ಯೋಜನೆ
ಅವಶ್ಯಕ ಪ್ರದೇಶಗಳಲ್ಲಿ ನೀರಿನ ಸಮರ್ಥ ಬಳಕೆಯು ಕೇವಲ ಬೆಳೆಯ ಹೆಚ್ಚಿಸುವುದು ಮಾತ್ರವಲ್ಲದೇ ಹೆಚ್ಚಿನ ಪ್ರದೇಶದ ಕೃಷಿಗೆ ನೀರನ್ನು ಒದಗಿಸುತ್ತದೆ. ನೀರಿನ ಅಭಾವ ಇರುವ ನಮ್ಮ ರಾಜ್ಯದ ಒಳಿತಿಗಾಗಿ ಕರ್ನಾಟಕ ಸರ್ಕಾರವು ಏಷ್ಯಾದ ಅತಿ ದೊಡ್ಡ ರಾಮತಾಳ-ಮರೋಳ ನೀರಾವರಿ ಯೋಜನೆಯ 2 ನೇ ಹಂತದ ಕಾಮಗಾರಿಗೆ ಚಾಲನೆ ನೀಡಿದೆ.
ಈ ಯೋಜನೆಯಡಿಯಲ್ಲಿ ಸಣ್ಣ ನೀರಾವರಿ ಕಲ್ಪನೆಯ ಮೂಲಕ ಹೆಚ್ ಡಿ ಪಿ ಇ/ಪಿವಿಸಿ ಪೈಪುಗಳನ್ನು ಬಳಸಿಕೊಂಡು 60,000 ಎಕರೆಗೆ ನೀರು ಹಾಯಿಸುವುದರ ಮೂಲಕ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ 20,000 ರೈತರಿಗೆ ಅನುಕೂಲ ಮಾಡಿಕೊಡುವ ದೊಡ್ಡ ಉದ್ದೇಶವನ್ನು ಹೊಂದಿದೆ. ಇದು ಸಾಂಪ್ರದಾಯಿಕ ನೀರಾವರಿ ಪದ್ದತಿಗಿಂತ ಅನುಕೂಲಕಾರಿಯಾಗಿದ್ದು ಬಹುತೇಕ ಎರಡು ಪಟ್ಟು ಭೂ ಪ್ರಮಾಣಕ್ಕೆ ನೀರಾವರಿ ಅನುಕೂಲವನ್ನು ಉಂಟುಮಾಡಲಿದೆ.
ಇದು ಸ್ವಲ್ಪ ವೆಚ್ಚದಾಯಕ ಯೋಜನೆಯಾದರೂ ಸಹ ಬಳಕೆಯ ದೃಷ್ಟಿಯಲ್ಲಿ ಎರಡು ಪಟ್ಟು ಅನುಕೂಲವನ್ನು ಹೊಂದಿದ್ದು ದೀರ್ಘ ಕಾಲದ ನೀರಾವರಿ ಯೋಜನೆಯಾಗಿದೆ. ಇಲ್ಲಿ ವಿದ್ಯುತ್ ನ ಉಳಿತಾಯಕ್ಕೆ ಅನುಗುಣವಾಗಿಯೂ ಸಹ ಯೋಜನೆಯನ್ನು ರೂಪಿಸಲಾಗಿದೆ. ಸಮರ್ಪಕ ನೀರಿನ ಪೂರೈಕೆಗೆ ಅನುಗುಣವಾಗಿರುವ ಈ ಯೋಜನೆಯಿಂದಾಗಿ ರೈತರು ಹೆಚ್ಚಿನ ಬೆಲೆಯ ವಾಣಿಜ್ಯ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬಹುದಾಗಿದ್ದು, ಇದರಿಂದ ರಸಗೊಬ್ಬರ ಹಾಗೂ ಕೂಲಿಯ ವೆಚ್ಚವೂ ಉಳಿತಾಯವಾಗಲಿದೆ. ವಿಶ್ವದ ಪ್ರಮುಖ ನೀರಾವರಿ ಸಂಸ್ಥೆಯಾದ ಜೈನ್ ನೀರಾವರಿ ಸಂಸ್ಥೆಯು 767 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯ ಜವಾಬ್ದಾರಿಯನ್ನು ಹೊತ್ತಿದೆ. ಇಲಾಖೆಯು 690 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಲಸೂರು ಬಳಿಯ ವರದ ನದಿ ಆಣೆಕಟ್ಟಿನಿಂದ ನೀರನ್ನು ಪಡೆದು 98,301 ಎಕರೆಗಳಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ಗುರಿಯನ್ನು ಹೊಂದಿದೆ.

ಹನಿ ನೀರಾವರಿಯ 60 ಸಾವಿರ ಎಕರೆಯಲ್ಲಿ ಪೈಪ್ ಒಡೆದರೂ, ಏನೇ ಸಮಸ್ಯೆಯಾದರೂ ಕೂಡಲೇ ಕಂಪ್ಯೂಟರ್ಗೆ ಉಪಗ್ರಹದ ಮೂಲಕ ಮಾಹಿತಿ ರವಾನೆಯಿಂದ ನಿರ್ವಹಣೆ ಸುಲಭ. ರೈತರಿಗೆ ನೀರಿನ ಅಗತ್ಯವಿಲ್ಲದಿದ್ದರೆ ಅದನ್ನು ಸ್ಥಗಿತಗೊಳಿಸುವ ವ್ಯವಸ್ಥೆ ಇದೆ.
ಹನಿ ನೀರಾವರಿಗೆ ಮುಖ್ಯ ಪೈಪ್ಲೈನ್ ಮತ್ತು ವಿತರಣಾ ಪೈಪ್ಲೈನ್ನಿಂದ ನೇರವಾಗಿ ಜಮೀನಿಗೆ ಸಂರ್ಪಸಲು ಅಗತ್ಯವಿರುವ ಪೈಪುಗಳನ್ನು ರೈತರಿಗೆ ನೀಡಲಾಗಿದೆ. ಈ ಯೋಜನೆ ನಿರ್ವಹಣೆಗೆ ರೈತರ 53 ನೀರು ನಿರ್ವಹಣಾ ಸಂಘಗಳ ರಚಿಸಿದ್ದು, ಐದು ವರ್ಷದ ತನಕ ಗುತ್ತಿಗೆ ಪಡೆದ ಕಂಪನಿಗಳೇ ಈ ಯೋಜನೆ ನಿರ್ವಹಿಸಲಿದೆ. ಬಳಿಕ ಆ ಜವಾಬ್ದಾರಿ ನೀರು ನಿರ್ವಹಣಾ ಸಂಘಗಳಿಗೆ ವರ್ಗವಾಗಲಿದೆ.

ಕಾಲುವೆಗಳಿಗೆ ಸೌರಶಕ್ತಿ ಸ್ಥಾವರಗಳ ಅಳವಡಿಕೆ
ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ನೀರು, ವಿದ್ಯುತ್ ಮತ್ತು ಆಹಾರದ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ಕಾರಣದಿಂದಾಗಿ 1 ಮೆಗಾವ್ಯಾಟ್ ಸಾಮರ್ಥ್ಯದ ಕಾಲುವೆ ಮೇಲಣ ಸೌರಶಕ್ತಿ ಸ್ಥಾವರಗಳ ಅಳವಡಿಕೆಗೆ ಉದ್ದೇಶಿಸಲಾಗಿದ್ದು ಆಲಮಟ್ಟಿ ಜಲಾಶಯದ ಎಡ ದಂಡಯಲ್ಲಿ ಒಟ್ಟು 10 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಈ ವಿದ್ಯುತ್ ಯೋಜನೆಯು ಪ್ರತಿ ದಿನ 5000 ಯೂನಿಟ್ ಗಳಷ್ಟು ವಿದ್ಯುತ್ ಉತ್ಪಾದನೆಯಾಗಲಿದೆ.
ಇದೇ ಮಾದರಿಯಲ್ಲಿ ಕೊಪ್ಪಳದ ಬಳಿಯಲ್ಲೂ ಸಹ 10 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಸೌರಶಕ್ತಿ ಸ್ಥಾವರಗಳ ಅಳವಡಿಕೆಯು ಕಾರ್ಯಗತಿಯಲ್ಲಿದೆ.

ವಿಜಯಪುರದ ಐತಿಹಾಸಿಕ ಟ್ಯಾಂಕ್ ತುಂಬುವ ಯೋಜನೆ
ಸತತ ಮಳೆಗಾಲದ ವೈಫಲ್ಯತೆಯಿಂದ ಕಂಗೆಟ್ಟಿದ್ದ ಬಿಜಾಪುರದ ಭಾಗಕ್ಕೆ ನೀರಾವರಿ ಸೌಲಭ್ಯವನ್ನು ಹೆಚ್ಚುಗೊಳಿಸಲಾಗಿದ್ದು ಮಮದಾಪುರ, ಭೂತನಾಳ, ಬೇಗಂ ತಲಬ್, ಬಾಬಾಲೇಶ್ವರ, ಸರವಾಡ, ತಿಡಗುಂಡಿ ಮತ್ತು ಉನ್ನಿತರೆ 54 ಇತರೆ ಟ್ಯಾಂಕ್ ಗಳಿಗೆ ನೀರನ್ನು ಒದಗಿಸುವುವ ಮಹತ್ತರ ಯೋಜನೆ ಇದಾಗಿದ್ದು ಕೃಷ್ಣಾ ನದಿಯಿಂದ ಸುಮಾರು 60 ಕಿಲೋಮೀಟರ್ ವರೆಗೆ ನೀರನ್ನು ಪೂರೈಸುವ ಯೋಜನೆ ಇದಾಗಿದೆ. ಬೇಗಂ ತಲಬ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಇದರ ಅಧಿಕೃತ ಉದ್ಘಾಟನೆ ಆಗಿರುತ್ತದೆ.

"ಬಿಜಾಪುರವು ಆದಿಲ್ ಷಾಹಿ ಸಂದರ್ಭದಲ್ಲಿ ಏಳು ಕೆರೆಗಳ ನಾಡು ಎಂದು ಹೆಸರಾಗಿತ್ತು. ಈ ಕೆರೆಗಳನ್ನು ತುಂಬಿಸುವುದು ಕೇವಲ ನನ್ನ ಕನಸಲ್ಲಿ ಇದು ವಿಜಯಪುರ ಜನತೆಯ ಕನಸು”
– ಎಂ.ಬಿ.ಪಾಟೀಲ್, ಜಲ ಸಂಪನ್ಮೂಲ ಸಚಿವರು.

ಇಷ್ಟೇ ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2013-14 ರ ಬಜೆಟ್ ನಲ್ಲಿ ಘೋಷಿಸಿದಂತೆ ನೀರಾವರಿ ಇಲಾಖೆಯು ಇನ್ನೂ 1300 ಕೆರೆಗಳನ್ನು ತುಂಬಿಸುವ ಕೆಲಸವನ್ನು ಮಾಡುತ್ತಿದ್ದು ಇದರಿಂದ ಬಳ್ಳಾರಿ, ಮೈಸೂರು, ಚಾಮರಾಜನಗರ, ತುಮಕೂರು, ಹಾಸನ, ರಾಮನಗರ ಮತ್ತು ಮಂಡ್ಯ ಜಿಲ್ಲೆಗಳಿಗೆ ಅನುಕೂಲವಾಗಲಿದೆ.

ನಾರಾಯಣಪುರ ಎಡ ನಾಲಾ ದಂಡೆಯ ಆಧುನೀಕರಣ (NLBC)
ಇದು ಕೃಷ್ಣಾ ಮೇಲ್ದಂಡೆ ಯೋಜನೆಯ ಅತಿ ದೊಡ್ಡ ಯೋಜನೆಯಾಗಿದ್ದು ಒಟ್ಟು 10,000 ಕ್ಯೂಸೆಕ್ ನೀರನ್ನು 4.50 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಒದಗಿಸಲಿದ್ದು ಉತ್ತರ ಕರ್ನಾಟಕದ ಬರಪೀಡಿತ ಭೂ ಪ್ರದೇಶಗಳಿಗೆ ವರದಾನವಾಗಿ ಪರಿಣಮಿಸಿದೆ.
2013 ರ ಅಕ್ಟೋಬರ್ ತಿಂಗಳಲ್ಲಿ ಇಲಾಖೆಯು ನಾರಾಯಣಪುರ ಎಡ ನಾಲಾ ದಂಡೆಯ ಆಧುನೀಕರಣಕ್ಕಾಗಿ 4233 ಕೋಟಿ ರೂಪಾಯಿಗಳ ಅನುದಾನವನ್ನು ಘೋಷಿಸಿತು. ಈ ಪ್ರಕಾರವಾಗಿ ಅಗತ್ಯ ಪ್ರದೇಶಗಳಿಗೆ ಸಮರ್ಪಕವಾಗಿ ನೀರನ್ನು ಒದಗಿಸಲು ಸೂಕ್ತ ನೀರಿನ ನಿರ್ವಹಣೆಯನ್ನು ಮಾಡಲಾಗುತ್ತಿದ್ದು ಬರ ಪೀಡಿತ ಪ್ರದೇಶದ ಅನ್ನದಾತರಿಗೆ ಮತ್ತು ಜನತೆಗೆ ಇದು ಸಂಜೀವಿನಿಯಂತಹ ಯೋಜನೆಯಾಗಿದೆ.

Namma-Karntaka-_water_resource-1

ಕಾವೇರಿ ಜಲಾಯನ ಕಾಲುವೆಗಳ ಆಧುನೀಕರಣ
ಕಾವೇರಿ ಜಲಾಯನದ ಅಡಿಯಲ್ಲಿ ಶತಮಾನಗಳಷ್ಟು ಹಳೆದಾದ ಒಟ್ಟು 23 ಅಣೆಕಟ್ಟುಗಳ ಪ್ರಮುಖ ಕಾಲುವೆಗಳನ್ನು ಆಧುನೀಕರಣಗೊಳಿಸಲಾಗುತ್ತಿದ್ದು ಈಗಾಗಲೇ 13 ಅಣೆಕಟ್ಟಿನ ಕಾಲುವೆಗಳ ಕಾಮಗಾರಿಯು ಪೂರ್ಣಗೊಂಡಿದ್ದಿ ಇದಕ್ಕಾಗಿ 1,588 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿರುತ್ತದೆ. 2017-18 ರಲ್ಲಿ ಅಂದಾಜು 509.55 ಕೋಟಿ ರೂಗಳ ವೆಚ್ಚದಲ್ಲಿ ಕಾವೇರಿ ಜಲಾಯನ ಕಾಲುವೆಗಳ ಪೈಕಿ ಒಟ್ಟು 374 ಕಿಲೋಮೀಟರ್ ಗಳಷ್ಟು ಉದ್ದದ ಕಾಲುವೆಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಎತ್ತಿನ ಹೊಳೆ ಏತ ನೀರಾವರಿ ಯೋಜನೆ
ಕರ್ನಾಟಕ ಸರ್ಕಾರದ ಪ್ರಯತ್ನದಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಸಬಲ್ಲ ಬಹು ನಿರೀಕ್ಷಿತ ಎತ್ತಿನ ಹೊಳೆ ಯೋಜನೆಗೆ ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ ನಿಂದ ಹಸಿರು ನಿಶಾನೆ ದೊರೆತಿದೆ. ಏತ ನೀರಾವರಿ ವ್ಯವಸ್ಥೆಯನ್ನೂ ಸಹ ಇದರಲ್ಲಿ ಅಳವಡಿಸಲಾಗಿದ್ದು ಈಗಾಗಲೇ 34 ಕಿಲೋಮೀಟರ್ ಗಳಷ್ಟು ಉದ್ದದ ಅಡ್ಡಗಟ್ಟೆಗಳ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಈ ಯೋಜನೆಯಡಿಯಲ್ಲೇ ಕೊರಟಗೆರೆ ತಾಲ್ಲೂಕಿನ ಭೈರಗೊಂಡ್ಲು ಅಣೆಕಟ್ಟನ್ನು ನಿರ್ಮಿಸುವ ಗುರಿ ಹೊಂದಿದ್ದು. 13,000 ಕೋಟಿ ರೂಪಾಯಿಗಳ ಈ ಯೋಜನೆಯು ಪೂರ್ಣಗೊಂಡ ನಂತರ ನೇತ್ರಾವತಿ ನದಿಯಿಂದ 24.01 ಟಿಎಂಸಿ ಪ್ರಮಾಣದಷ್ಟು ನೀರು ದೊರೆಯಲಿದೆ.

ಏತನೀರಾವರಿ ಯೋಜನೆಗಳು
ಕರ್ನಾಟಕದ ಸರ್ಕಾರದ ನೀರಾವರಿ ಇಲಾಖೆಯ ವತಿಯಿಂದ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು ವಿಜಯಪುರ, ಬಾಗಲಕೋಟೆ, ಕಲ್ಬುರ್ಗಿ, ಯಾದಗಿರಿ,ಬೆಳಗಾವಿ, ಹಾಸನ, ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆಗಳಿಗೆ ಈ ಏತ ನೀರಾವರಿಯಿಂದ ಅನುಕೂಲವಾಗಿರುತ್ತದೆ.

ಈ ಪೈಕಿ ಕೆಲವೊಂದು ಪ್ರಮುಖ ಯೋಜನೆಗಳು ಈ ಕೆಳಕಾಣಿಸಿದಂತಿವೆ:
• ನಾರಾಯಣಪುರ ಎಡದಂಡೆ ಕಾಲುವೆ ಜಾಲದ ಆಧುನೀಕರಣ ಯೋಜನೆಯಡಿ SCADA Based Automation ಅನುಷ್ಠಾನ.
• ಕೆಂಪವಾಡ (ಬಸವೇಶ್ವರ) ಏತ ನೀರಾವರಿ ಯೋಜನೆ. ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಚಿಲವಾರ ಬಂಡಿ ಏತ ನೀರಾವರಿ ಯೋಜನೆ. ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ. ಮದ್ದೂರು ತಾಲ್ಲೂಕಿನ 6 ಏತ ನೀರಾವರಿ ಯೋಜನೆಗಳ ಪುನಶ್ಚೇತನ ಮತ್ತು 16 ಕೆರೆಗಳನ್ನು ತುಂಬಿಸುವ ಯೋಜನೆ.
• ಮುತ್ತಿನಮುಳಿಸೋಗೆಯಿಂದ ಪಿರಿಯಾಪಟ್ಟಣದ ತಾಲ್ಲೂಕಿಗೆ 150 ಕೆರೆ ತುಂಬಿಸುವ ಯೋಜನೆ. ಕನಕಪುರ ತಾಲ್ಲೂಕಿನ ಗರಳಾಪುರ ಮತ್ತು ಇತರೆ 12 ಕೆರೆ ತುಂಬಿಸುವ ಯೋಜನೆ. ಹನಗೋಡು ಸರಣಿ ನಾಲೆಗಳ ಆಧುನೀಕರಣ. ಹೊಳೆನರಸೀಪುರ ತಾಲ್ಲೂಕಿನ ರಂಗೇನಹಳ್ಳಿ ಮತ್ತು ಇತರೆ 22 ಕೆರೆಗಳನ್ನು ತುಂಬಿಸುವ ಯೋಜನೆ.
• ನಂಜನಗೂಡು ತಾಲ್ಲೂಕಿನ ಹುರ ಮತ್ತು 25 ಕೆರೆಗಳನ್ನು ತುಂಬಿಸುವ ಯೋಜನೆ. ಗುರುಮಿಠಕಲ್ ಮತ್ತು ಯಾದಗಿರಿ ತಾಲ್ಲೂಕುಗಳ ಯರಗೋಳ ಮತ್ತು ಇತರೆ 5 ಕೆರೆಗಳನ್ನು ತುಂಬಿಸುವ ಯೋಜನೆ.
• ಮುದ್ದೇಬಿಹಾಳ ತಾಲ್ಲೂಕಿನ 20,472 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಪೀರಾಪುರ-ಬೂದಿಹಾಳ್ ಏತ ನೀರಾವರಿ ಯೋಜನೆ.
• ಇಂಡಿ ತಾಲ್ಲೂಕಿನ 9,278 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಚಡಚಣ ಏತ ನೀರಾವರಿ ಯೋಜನೆ. ನಂದವಾಡಗಿ ಏತ ನೀರಾವರಿ ಯೋಜನೆ.
• ಕೊಪ್ಪಳ ಹಾಗೂ ಸಿಂಗಟಾಲೂರು ಏತ ನೀರಾವರಿ ಯೋಜನೆಗಳಡಿ ಪ್ರಸಕ್ತ ಸಾಲಿನಲ್ಲಿ 20,000 ಹೆಕ್ಟೇರ್ ಪ್ರದೇಶದಲ್ಲಿ ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಸಲು ಕ್ರಮ. ಎತ್ತಿನ ಹೊಳೆ ಯೋಜನೆಯಡಿ ಈಗಾಗಲೇ ಕೈಗೆತ್ತಿಕೊಂಡಿರುವ lift component ಅನ್ನು ಪೂರ್ಣಗೊಳಿಸಿ ನೀರನ್ನು ಎತ್ತಲು ಕ್ರಮ ಕೈಗೊಳ್ಳಲಾಗುವುದು. ಬೈರಗೊಂಡ್ಲು ಜಲಾಶಯ ನಿರ್ಮಾಣ ಪ್ರಾರಂಭ ಹಾಗೂ ಕಾಲುವೆ ಕಾಮಗಾರಿಗಳನ್ನು (Conveyance) ಪ್ರಾರಂಭಿಸಲಾಗುವುದು.
• ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಗರಬೆಟ್ಟ ಏತ ನೀರಾವರಿ ಯೋಜನೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಯಳ್ಳಿಗುತ್ತಿ ಗ್ರಾಮಕ್ಕೆ ನೀರು ಒದಗಿಸುವ ಯೋಜನೆ.
• ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯ ಯಾದಗಿರ, ಚೋಳದಹೆಡಗಿ-ಗೂಡುರ, ಘತ್ತರಗಾ ಹಾಗೂ ಕಲ್ಲೂರು-ಬಿ ಬ್ಯಾರೇಜುಗಳಿಗೆ ಆಧುನಿಕ ಗೇಟ್‍ಗಳ ಅಳವಡಿಕೆ ಮತ್ತು ಪುನಶ್ಚೇತನ ಕಾಮಗಾರಿಗಳು. ಸನ್ನತಿ ಯೋಜನೆ ಮೂಲಕ ಯಾದಗಿರಿ ತಾಲ್ಲೂಕಿನ 35 ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆ.
• ಆಲಮಟ್ಟಿ ಎಡದಂಡೆ ಕಾಲುವೆ ಆಧುನೀಕರಣ. ಬಸವಕಲ್ಯಾಣ ತಾಲ್ಲೂಕಿನ ಕೊಂಗಳಿ ಬ್ಯಾರೇಜಿನಿಂದ ನೀರನ್ನು ಎತ್ತಿ ಚುಲ್ಕಿನಾಲಾ ಜಲಾಶಯ ಮತ್ತು ಕೆರೆಗಳನ್ನು ತುಂಬಿಸುವ ಯೋಜನೆ.
• ಕಾರಂಜಾ ಜಲಾಶಯದ ಒಳಹರಿವಿನ ಕೊರತೆಯನ್ನು ಸರಿದೂಗಿಸಲು ಬಲದಂಡೆ ಕಾಲುವೆ ಕಿ.ಮೀ. 60 ಮತ್ತು 90 ರಲ್ಲಿ ಮಾಣಿಕೇಶ್ವರ ಮತ್ತು ಹಾಲಹಳ್ಳಿ ಬ್ಯಾರೇಜ್‍ನಿಂದ ನೀರನ್ನು ಒದಗಿಸಿ ಅಚ್ಚುಕಟ್ಟನ್ನು ಸ್ಥಿರೀಕರಿಸುವ ಯೋಜನೆ. ಕಲಬುರಗಿ ಜಿಲ್ಲೆಯ ಗಂಡೋರಿನಾಲ ಮತ್ತು ಮುಲ್ಲಾಮಾರಿ ಮೇಲ್ದಂಡೆ ಯೋಜನೆಗಳ ಆಧುನೀಕರಣ.
• ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ 10 ಗ್ರಾಮಗಳ 17 ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬಿಸುವ ಯೋಜನೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ದೊಡ್ಡಕೆರೆಗೆ ನೀರು ತುಂಬಿಸುವ ಯೋಜನೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆಯಿಂದ ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಮದಗ ಮಾಸೂರು ಕೆರೆಯಿಂದ ಹಿರೇಕೆರೂರು ಪಟ್ಟಣದ ದುರ್ಗಾದೇವಿ ಹಾಗೂ ಬಹುಗ್ರಾಮ ಕೆರೆಗಳಿಗೆ ವರದಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ.
• ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಇಟಗಿ ಗ್ರಾಮದ ಬಳಿ ತುಂಗಭದ್ರಾ ನದಿಯಿಂದ ಕೆರೆಗಳನ್ನು ತುಂಬಿಸುವ ಯೋಜನೆ. ಮಾಲವಿ ಜಲಾಶಯದ ಒಳ ಹರಿವಿನ ಕೊರತೆ ಸರಿದೂಗಿಸಲು ತುಂಗಭದ್ರಾ ನದಿಯಿಂದ ನೀರು ಪೂರೈಕೆ ಮಾಡುವ ಯೋಜನೆ.
• ಹರಪನಹಳ್ಳಿ ತಾಲ್ಲೂಕಿನ 60 ಕೆರೆಗಳನ್ನು ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ. ಬೆಳಗಾವಿ ಜಿಲ್ಲೆಯ ಕಿತ್ತೂರು ಮತಕ್ಷೇತ್ರದ ಕೆರೆಗಳಿಗೆ ಮಲಪ್ರಭಾ ನದಿಯಿಂದ ನೀರು ತುಂಬಿಸುವ ಯೋಜನೆ.
• ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಕುಡಚಿ ಮತಕ್ಷೇತ್ರದಡಿ ಬರುವ 10 ಗ್ರಾಮಗಳ 19 ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬಿಸುವ ಯೋಜನೆ. ಧಾರವಾಡ ಜಿಲ್ಲೆಯ ಧಾರವಾಡ ತಾಲ್ಲೂಕಿನ ಬರಪೀಡಿತ ತಡಕೋಡ, ಬೋಕಾಪುರ, ಗರಗ, ಹಳೇಟೆಗೂರ, ಬೊಗೂರ ಮತ್ತು ನೀರಲಕಟ್ಟಿ ಗ್ರಾಮಗಳ ಕೆರೆಗಳನ್ನು ತುಪರಿ ಹಳ್ಳದಿಂದ ತುಂಬಿಸುವ ಯೋಜನೆ.
• ಭೀಮಾ ನದಿಯಿಂದ ಹೆಚ್ಚುವರಿ ನೀರನ್ನು ಅಮರ್ಜಾ ಜಲಾಶಯಕ್ಕೆ ತುಂಬಿಸುವ ಯೋಜನೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಶ್ರೀರಾಮದೇವರ ಅಣೆಕಟ್ಟಿನ ಪುನರ್ ನಿರ್ಮಾಣ.
• ಕಾವೇರಿ ಕೊಳ್ಳದಡಿಯಲ್ಲಿ ಒಟ್ಟು 374 ಕಿ.ಮೀ. ಉದ್ದದ ನಾಲಾ ಅಭಿವೃದ್ಧಿ ಕಾಮಗಾರಿಗಳನ್ನು 509.55 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಂಡಿದೆ.

ಇಲಾಖೆಗೆ ಸರ್ಕಾರ ನೀಡಿರುವ ಅನುದಾನದ ಪ್ರಮಾಣ

Department-of-Water-Resources