/ #department

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ರಾಜ್ಯದ ಮಹಿಳೆಯರು, ಮಕ್ಕಳು ಮತ್ತು ವಿಕಲಚೇತನರನ್ನು ರಕ್ಷಿಸುವ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಹೊಂದಿದೆ. ಇದಿಷ್ಟೇ ಅಲ್ಲದೇ ಅವರ ಅಭಿವೃದ್ಧಿಗಾಗಿ ಸರ್ಕಾರೀ ಅಥವಾ ಸರ್ಕಾರೇತರವಾಗಿ ಅಗತ್ಯ ನೀತಿಗಳನ್ನು ರೂಪಿಸುವುದು ಇದರ ಉದ್ದೇಶವಾಗಿದೆ.

Namma-Karntaka-Post_Maathru-Poorna-1

ಸಚಿವೆಯಾದ ಶ್ರೀಮತಿ. ಉಮಾಶ್ರೀ ಅವರ ಸಮರ್ಥ ಆಡಳಿತದಲ್ಲಿ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಇಲಾಖೆಯ ವತಿಯಿಂದ ಕಳೆದ ನಾಲ್ಕು ವರ್ಷಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದ್ದು ಅವು ಈ ಕೆಳಕಂಡಂತಿವೆ:

ಮಾತೃ ಪೂರ್ಣ
1.2 ಮಿಲಿಯನ್ ಗರ್ಭಿಣಿ ಮಹಿಳೆಯರ ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಸರ್ಕಾರವು ಮಾತೃಪೂರ್ಣ ಯೋಜನೆಯನ್ನು ಜಾರಿಗೊಳಿಸಿದೆ. ತಿಂಗಳಲ್ಲಿ 25 ದಿನಗಳ ಕಾಲ ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರಿಗೆ ಗರ್ಭದರಿಸಿದ ದಿನದಿಂದ ಹೆರಿಗೆ ಆದ 6 ತಿಂಗಳ ವರೆಗೆ ಮಗುವಿನ ಸುರಕ್ಷತೆಗಾಗಿ ಅನ್ನ,ಬೇಳೆ, ತರಕಾರಿ, ಮೊಟ್ಟೆ 200 ಮಿಲಿ ಹಾಲು ಮತ್ತು ಕಡಲೆಕಾಯಿ, ಬೆಲ್ಲವನ್ನು ನೀಡಲಾಗುತ್ತಿದೆ. ಮೊಟ್ಟೆಯನ್ನು ತಿನ್ನದೇ ಇರುವವರಿಗೆ ಮೊಳಕೆ ಕಾಳನ್ನು ನೀಡಲಾಗುತ್ತದೆ. ಮಕ್ಕಳ ಸುರಕ್ಷತೆಯ ಈ ಯೋಜನೆಗಾಗಿ ಬಜೆಟ್ ನಲ್ಲಿ 302 ಕೋಟಿ ರೂಪಾಯಿ ಅನುದಾನವನ್ನು ಕಲ್ಪಿಸಲಾಗಿದೆ.

"ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರ ಸುರಕ್ಷತೆಗಾಗಿ, ಪೌಷ್ಠಿಕ ಆಹಾರವನ್ನು ಪೂರೈಕೆ ಮಾಡಲಾಗುತ್ತಿದ್ದು ಆಂಧ್ರ ಪ್ರದೇಶ ಮತ್ತು ತೆಲಂಗಾಣದ ನಂತರ ಈ ಯೋಜನೆಯನ್ನು ಜಾರಿಗೊಳಿಸುತ್ತಿರುವ ದೇಶದ ಮೂರನೇ ರಾಜ್ಯ ಕರ್ನಾಟಕವಾಗಿದೆ"
– ಮುಖ್ಯಮಂತ್ರಿ ಸಿದ್ದರಾಮಯ್ಯ

"ಗರ್ಭಿಣಿ ಮಹಿಳೆಯರ ಆರೋಗ್ಯ ಸುಧಾರಣೆಯು ಮಕ್ಕಳ ಉತ್ತಮ ಬೆಳವಣಿಗೆಯ ಮೇಲೆ ನೇರವಾದ ಪ್ರಭಾವವನ್ನು ಬೀರುತ್ತದೆ. ಇದು ಮಕ್ಕಳ ಅಪೌಷ್ಟಿಕತೆ ಪ್ರಮಾಣವನ್ನು ತಡೆಗಟ್ಟುತ್ತದೆ."
– ಶ್ರೀಮತಿ. ಉಮಾಶ್ರೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ.

ಕ್ಷೀರ ಭಾಗ್ಯ
ಶಾಲೆಯಲ್ಲಿ ಮಕ್ಕಳ ದೈಹಿಕ ಪೌಷ್ಠಿಕಾಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಾರದಲ್ಲಿ 5 ದಿನಗಳ ಕಾಲ ಸರ್ಕಾರದ “ಕ್ಷೀರ ಭಾಗ್ಯ “ ಯೋಜನೆಯಡಿಯಲ್ಲಿ ಮಕ್ಕಳಿಗೆ ಕೆನೆಭರಿತ ಹಾಲನ್ನು ನೀಡಲಾಗುತ್ತಿದ್ದು 38.21 ಲಕ್ಷ ಶಾಲಾ ಮಕ್ಕಳು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಹೆಚ್ಚುವರಿಯಾಗಿ 2017 ರಿಂದ ಶಾಲೆಗಳಲ್ಲಿ ಮಕ್ಕಳಿಗೆ ವಾರಕ್ಕೆ ಎರಡು ದಿನ ಮೊಟ್ಟೆಗಳನ್ನು ವಿತರಿಸಲಾಗುತ್ತಿದೆ.

ಸ್ತ್ರೀ ಶಕ್ತಿ ಸಬಲೀಕರಣ
ಸ್ತ್ರೀ ಶಕ್ತಿ ಸಂಘಗಳ ಅಭಿವೃದ್ಧಿಗಾಗಿ ಇಲಾಖೆಯು ಈ ಮುನ್ನ ನೀಡಲಾಗುತ್ತಿದ್ದ ಸುತ್ತು ನಿಧಿಯನ್ನು 5,000 ರೂಪಾಯಿಗಳಿಂದ 25,000 ರೂಪಾಯಿಗಳ ವರೆಗೆ ಹೆಚ್ಚಿಸಿದ್ದು ಇದರಿಂದ 1.31 ಲಕ್ಷ ಸ್ತ್ರೀ ಶಕ್ತಿ ಸಂಘಟನೆಗಳಿಗೆ ಅನುಕೂಲವಾಗಿರುತ್ತದೆ.

DM_9X3NVQAAn502

ಕರ್ನಾಟಕ ಮಕ್ಕಳ ನಿಧಿ
ಲೈಂಗಿಕ ಶೋಷಣೆಗೆ ಒಳಗಾಗಿ ತೊಂದರೆ ಅನುಭವಿಸುವ 18 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ತತಕ್ಷಣದ ಪರಿಹಾರವನ್ನು ನೀಡಲು ಕರ್ನಾಟಕ ಮಕ್ಕಳ ನಿಧಿಯನ್ನು ಸ್ಥಾಪಿಸಲಾಗಿದೆ. ಕರ್ನಾಟಕದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಸುರಕ್ಷತಾ ನೀತಿಗಳನ್ನು ಜಾರಿಗೊಳಿಸಲಾಗಿದೆ.

ಮಹಿಳೆಯರಿಗೆ ಉದ್ಯೋಗಗಳಲ್ಲಿ 33% ಮೀಸಲಾತಿ
ಮಹಿಳೆಯರು ಸರ್ಕಾರೀ ಸೇವೆಗಳಲ್ಲಿ ಪ್ರಾತಿನಿಧ್ಯತೆ ಪಡೆದು ಸಬಲಗೊಳ್ಳಲು ಕರ್ನಾಟಕ ಲೋಕ ಸೇವಾ ಪರೀಕ್ಷೆಗಳಲ್ಲಿ ಮಹಿಳೆಯರ ಮೀಸಲಾತಿಯನ್ನು ಶೇಕಡಾ 30 ರಿಂದ 33 ಕ್ಕೆ ಏರಿಕೆ ಮಾಡಲಾಗಿದೆ. ಅಗ್ನಿಶಾಮಕ ಸೇವೆಗಳು ಮತ್ತು ವಿದ್ಯುತ್ ಹಾಗೂ ಪೊಲೀಸ್ ಸೇವೆಗಳು ಮಾತ್ರ ಇದರಿಂದ ಹೊರತಾಗಿದೆ. ಹೀಗೆ ಮೂರು ಉದ್ಯೋಗಳಲ್ಲಿ ಒಂದು ಉದ್ಯೋಗವನ್ನು ಮಹಿಳೆಯರಿಗೆಂದೇ ಸರ್ಕಾರವು ಮೀಸಲಿಟ್ಟಿದೆ.

Part_1
Part_2

ವಿಕಲ ಚೇತನರ ಅಭಿವೃದ್ಧಿ ಕಾರ್ಯಕ್ರಮಗಳು
ವಿಕಲಚೇತನರಿಗೆ ಮಾಸಿಕ 1,000 ರೂಪಾಯಿಗಳಷ್ಟು ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತಿದೆ. ಅವರ ವೈದ್ಯಕೀಯ ಪರಿಹಾರ ವೆಚ್ಚವನ್ನು 35,000 ರೂಪಾಯಿಗಳಿಂದ 1 ಲಕ್ಷ ರೂಪಾಯಿಗಳ ವರೆಗೆ ಏರಿಕೆ ಮಾಡಲಾಗಿದೆ. ವಿವಾಹ ಪ್ರೋತ್ಸಾಹ ಧನ ಯೋಜನೆಯಡಿಯಲ್ಲಿ ವಿಕಲ ಚೇತನ ಅಭ್ಯರ್ಥಿಗಳನ್ನು ಮದುವೆಯಾಗುವ ಸಾಮಾನ್ಯ ವ್ಯಕ್ತಿಗಳಿಗೆ 50,000 ರೂಪಾಯಿಗಳ ಸಹಾಯಧನವನ್ನು ನೀಡಲಾಗುತ್ತಿದೆ. ವಿಕಲ ಚೇತನ ಮಹಿಳೆಯರು/ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವುದಕ್ಕಾಗಿ 24 ಜಿಲ್ಲೆಗಳಲ್ಲಿ ಒಟ್ಟು 27 ಮಹಿಳಾ ಹಾಸ್ಟೆಲ್ ಗಳನ್ನು ಸ್ಥಾಪಿಸಲಾಗಿದೆ. ಇಷ್ಟೇ ಅಲ್ಲದೇ ವಿಕಲಚೇತರನ್ನು ಆರೈಕೆ ಮಾಡುವವರ ಗೌರವ ಧನವನ್ನು ಸಹ ಗಣನೀಯವಾಗಿ ಹೆಚ್ಚಿಸಲಾಗಿದೆ.

ವಿಕಲ ಚೇತನರ ಅಭಿವೃದ್ಧಿಗಾಗಿ ತಿಂಗಳಿಗೆ 906 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗುತ್ತಿದ್ದು ಇದರಿಂದ ಒಟ್ಟು 8.4 ಲಕ್ಷ ವಿಕಲಚೇತನ ಅಭ್ಯರ್ಥಿಗಳಿಗೆ ಅನುಕೂಲವಾಗಿದೆ. “ ಸ್ವಾವಲಂಬನಾ” ಯೋಜನೆಯಡಿಯಲ್ಲಿ ಇಲಾಖೆಯ ವತಿಯಿಂದ ಯೋಜನೆಯ 1.12 ಲಕ್ಷ ಫಲಾನುಭವಿಗಳಿಗೆ ವಿಮಾ ಸೌಲಭ್ಯವನ್ನೂ ಸಹ ಕಲ್ಪಿಸಲಾಗಿದೆ.

ಆರೈಕೆ ಮಾಡುವವರಿಗೆ ಬೆಂಬಲ ಕಾರ್ಯಕ್ರಮಗಳು
ಅಂಗನವಾಡಿ ಕಾರ್ಯಕರ್ತೆಯರು ನಿಜಕ್ಕೂ ತಮ್ಮ ಸುತ್ತಣ ಜನ ಸಮುದಾಯಗಳಿಗೆ ಅತ್ಯುತ್ತಮವಾದ ಸೇವೆಯನ್ನು ನೀಡುತ್ತಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ಜನರಿಗಿಗಾಗಿ ಕೆಲಸ ಮಾಡುವ ಇವರ ಸೇವೆ ಎಲ್ಲರಿಗೂ ತಿಳಿದಿರುವಂತಹ ಸಂಗತಿಯಾಗಿದೆ. ಹೀಗಾಗಿ ಮೊದಲ ನಾಲ್ಕು ವರ್ಷಗಳಲ್ಲಿ ಇವರ ಸೇವೆಯನ್ನು ಗುರುತಿಸಿ ಇವರ ಗೌರವ ಧನವನ್ನು 1,500 ಮತ್ತು ಸಹಾಯಕರಿಗೆ 750 ರೂಪಾಯಿಗಳನ್ನು ಹೆಚ್ಚಿಸಲಾಗಯಿತು. 2017 ರಲ್ಲಿ ಮತ್ತೆ ಇವರ ಸೇವೆಯನ್ನು ಗುರುತಿಸಿ ಇವರ ಗೌರವ ಧನವನ್ನು ಕ್ರಮವಾಗಿ 2,000 ಮತ್ತು 1,000 ದಷ್ಟು ಹೆಚ್ಚಿಸಲಾಯಿತು. ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರು ಮಾಸಿಕ 8,000 ರೂಪಾಯಿ ಮತ್ತು ಸಹಾಯಕರುಗಳು 4,500 ರೂಪಾಯಿ ಆದಾಯವನ್ನು ಪಡೆದುಕೊಳ್ಳುವಂತಾಯಿತು.

ಧನಶ್ರೀ – ಹೆಚ್ ಐ ವಿ ಸೋಂಕಿತ ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ಕಾರ್ಯಕ್ರಮ
ಕರ್ನಾಟಕ ಸರ್ಕಾರದ ವತಿಯಿಂದ ಹೆಚ್ ಐ ವಿ ಸೋಂಕಿತ ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಮತ್ತು ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಸಾಲ ಮತ್ತು ಸಬ್ಸಿಡಿ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈ ಯೋಜನೆಯಡಿಯಲ್ಲಿ 40,000 ರೂಪಾಯಿಗಳ ಸಹಾಯ ಧನ ಮತ್ತು 4 ಬಡ್ಡಿ ದರದಲ್ಲಿ ಸಾಲವನ್ನು ನೀಡುವ ಯೋಜನೆಯಿದ್ದು ಇದಕ್ಕೆ ಬಹಳಷ್ಟು ಪ್ರಮಾಣದ ಸಬ್ಸಿಡಿಯನ್ನೂ ಸಹ ನೀಡಲಾಗುತ್ತಿದೆ. 18 ರಿಂದ 60 ವರ್ಷ ವಯೋಮಿತಿ ಒಳಗಿನ ಸೋಂಕು ಪೀಡಿತರು ಈ ಯೋಜನೆಯ ಫಲಾನುಭವಿಗಳಾಗಬಹುದಾಗಿದೆ. ಧನಶ್ರೀ ಯೋಜನೆಯನ್ನು ಕರ್ನಾಟಕ ಸರ್ಕಾರವು 2016 ರಿಂದ ಜಾರಿಗೆ ತಂದಿದೆ.

Namma-Karntaka-Women-Child

ಸಮೃದ್ಧಿ ಯೋಜನೆ – ರಸ್ತೆ ಬದಿ ಮಹಿಳಾ ವ್ಯಾಪಾರಿಗಳ ರಕ್ಷಣೆ
ಬೀದಿ ಬದಿಯಲ್ಲಿ ವ್ಯಾಪಾರ ನಡೆಸುತ್ತಾ ಜೀವನ ನಿರ್ವಹಣೆಯನ್ನು ಮಾಡುತ್ತಿರುವಂತಹ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಬಡ್ಡಿ ರಹಿತವಾಗಿ 10,000 ರೂಪಾಯಿಗಳಷ್ಟು ಸಾಲವನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ನೀಡಲಾಗುತ್ತಿದೆ.

ದೇವದಾಸಿಯರಿಗೆ ಪುನರ್ವಸತಿ ಯೋಜನೆ
ಮಾಜಿ ದೇವದಾಸಿಯರಿಗೆ ನೀಡಲಾಗುತ್ತಿದ್ದ ಮಾಸಿಕ ಪಿಂಚಣಿಯನ್ನು 400 ರೂ ನಿಂದ 1,500 ರೂಪಾಯಿಗಳ ತನಕ ಏರಿಕೆ ಮಾಡಲಾಗಿದೆ. ಮತ್ತು ಮನೆರಹಿತ ದೇವದಾಸಿಯರಿಗೆ 1.5 ಲಕ್ಷ ರೂಪಾಯಿ ಸಹಾಯ ಧನ (ಗ್ರಾಮೀಣ) ಮತ್ತು ನಗರ ಪ್ರದೇಶದಲ್ಲಿ 1.8 ಲಕ್ಷ ರೂಪಾಯಿಗಳಷ್ಟು ಸಹಾಯ ಧನವನ್ನು ನೀಡಲಾಗುತ್ತಿದೆ.

ಲೈಂಗಿಕ ಶೋಷಿತರಿಗೆ ವಿಶೇಷ ಚಿಕಿತ್ಸೆ
ಲೈಂಗಿಕವಾಗಿ ಶೋಷಿತರಾದ ಮಕ್ಕಳಿಗಾಗಿ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ 145 ವಿಶೇಷ ಚಿಕಿತ್ಸಾ ಘಟಕಗಳನ್ನು ನಿರ್ಮಾಣ ಮಾಡಲಾಗಿದ್ದು ಮಹಿಳಾ ಮತ್ತು ಮಕ್ಕಳ ಹಿತರಕ್ಷಣೆಗೆ ಹಲವು ಕ್ರಮಗಳನ್ನು ಕೈಗೊಂಡಿದೆ.

ಪಾಲನೆ ಕಾರ್ಯಕ್ರಮ
ಪಾಲನೆ ಯೋಜನೆಯಡಿಯಲ್ಲಿ ಹೆಚ್ ಐ ವಿ ಸೋಂಕು ಪೀಡಿತ ಮಕ್ಕಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು 1000 ರೂಪಾಯಿಗಳ ವರೆಗೆ ಹೆಚ್ಚಿಸಲಾಗಿದ್ದು ಇದರಿಂದ 25,000 ಜನ ಮಕ್ಕಳಿಗೆ ಅನುಕೂಲವಾಗಿದೆ.

ಸಾಲ ಮನ್ನಾ
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಡಿಯಲ್ಲಿ 9 ವಿವಿಧ ಯೋಜನೆಗಳ ಅಡಿಯಲ್ಲಿ 10,788 ಜನ ಮಹಿಳೆಯರಿಗೆ ನೀಡಲಾಗಿದ್ದ 8.25 ಸಾಲವನ್ನು ಮನ್ನಾ ಮಾಡಲಾಗಿದೆ.

ಇಲಾಖೆಗೆ ಸರ್ಕಾರ ನೀಡಿರುವ ಅನುದಾನದ ಪ್ರಮಾಣ

Department-of-Women-and-Children-Development--Disabled-and-Senior-Citizen-empowerment