/ CM

ಯಾದಗಿರಿ ಜಿಲ್ಲೆಗೆ ರಾಜ್ಯ ಸರ್ಕಾರದ ಕೊಡುಗೆಗಳು

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಯಾದಗಿರಿ ಜಿಲ್ಲೆಯು ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದ್ದು ಜಿಲ್ಲೆಗಾಗಿ ಈ ಕೆಳಕಾಣಿಸಿದಂತೆ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗಿದೆ.

  1. ಯಾದಗಿರಿ ನಗರದ ಚಿತ್ತಾಪೂರ ರಸ್ತೆಯಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣ ಮಾಡಲಾಗಿದ್ದು ಕಳೆದ ಫೆಬ್ರವರಿಯಲ್ಲಿ ಇದು ಸಿದ್ದರಾಮಯ್ಯ ಅವರಿಂದ ಲೋಕಾರ್ಪಣೆಗೊಂಡಿದೆ.
  2. ನೂತನ ಜಿಲ್ಲೆಯಲ್ಲಿ ಉತ್ತಮ ಆಡಳಿತ ಸೇವೆಗಳನ್ನ ಒದಗಿಸುವ ಸಲುವಾಗಿ ನಗರದ ಜಿಲ್ಲಾಡಳಿತ ಭವನದ ಪಕ್ಕದಲ್ಲಿಯೇ ಅಂದಾಜು 24 ಕೋಟಿ ರೂಪಾಯಿ ವೆಚ್ಚದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಎ,ಬಿ,ಸಿ ಹಾಗೂ ಡಿ ವರ್ಗದವರಿಗೆ ವಸತಿ ಗೃಹ ನಿರ್ಮಿಸಲಾಗಿದೆ. ಒಟ್ಟು 105 ವಸತಿ ಗೃಹ ಹೊಂದಿದ್ದು, ಇದು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿದೆ.
  3. ಯಾದಗಿರಿ ನಗರದ ಚಿತ್ತಾಪುರ ರಸ್ತೆಯಲ್ಲಿ 6.98 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಜಿಲ್ಲಾ ಪೊಲೀಸ್ ಕಚೇರಿ ನಿರ್ಮಾಣ-ಕಳೆದ ಅಕ್ಟೋಬರ್ 22 ರಂದು ಮಾನ್ಯ ಗೃಹ ಸಚಿವ ಶ್ರೀ ರಾಮಲಿಂಗಾ ರೆಡ್ಡಿ ಅವರಿಂದ ಲೋಕಾರ್ಪಣೆಗೊಂಡಿದೆ.

Yadagiri_Gok

  1. ಯಾದಗಿರಿ ಜಿಲ್ಲೆಯ ಕಡೆಚೂರು-ಬಾಡಿಯಾಳದ ಕೈಗಾರಿಕಾ ಪ್ರದೇಶದಲ್ಲಿ 80 ಕೋಟಿ ರೂ. ಬಂಡವಾಳ ಹೂಡಿಕೆಯ ಮೂಲಕ ಫಿಯಟ್ ರೈಲ್ವೆ ಬೋಗಿ ಫ್ರೇಮ್ ತಯಾರಿಕಾ ಕಾರ್ಖಾನೆಯನ್ನು ಕಳೆದ ಆಗಸ್ಟ್ 18 ರಂದು ಲೋಕಾರ್ಪಣೆಗೊಳಿಸಿದ್ದು ಇದು ವಾರ್ಷಿಕ 600 ಬೋಗಿಗಳ ಉತ್ಪಾದನಾ ಸಾಮಥ್ರ್ಯವನ್ನು ಹೊಂದಿದೆ.
  2. ಯಾದಗಿರಿ ನಗರ ಸಮೀಪ ಮುದ್ನಾಳ್ ಗ್ರಾಮದ ಬಳಿ 56 ಕೋಟಿ ರೂಪಾಯಿ ವೆಚ್ಚದಲ್ಲಿ 300 ಬೆಡ್ ಸಾಮಥ್ರ್ಯದ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಈಗಾಗಲೇ ಕಟ್ಟಡವು ಪೂರ್ಣಗೊಳ್ಳುತ್ತಿದ್ದು ಬಡವರಿಗೆ ಇದರಿಂದ ಸಾಕಷ್ಟು ಅನುಕೂಲವಾಗಲಿದೆ.
  3. 17.87 ಕೋಟಿ ರೂ. ವೆಚ್ಚದಲ್ಲಿ ಗುರುಮಠಕಲ್ ಪಟ್ಟಣ ಮತ್ತು 27+5 ಗ್ರಾಮಗಳಿಗೆ ಯಾದಗಿರಿಯ ಭೀಮಾ ನದಿಯಿಂದ ಕುಡಿಯುವ ನೀರು ತರುವ ಯೋಜನೆ ರೂಪಿಸಲಾಗಿದ್ದು ಈಗಾಗಲೇ 21 ಹಳ್ಳಿಗಳಿಗೆ ಪ್ರಾಯೋಗಿಕವಾಗಿ ನೀರು ಬಿಡಲಾಗುತ್ತಿದ್ದು, ಇದುವರೆಗೆ 109 ಕಿಲೋ ಮೀಟರ್ ಪೈಪ್‍ಲೈನ್‍ನ್ನು ಹಾಕಲಾಗಿದೆ.

Yadgiri-INCK

  1. ಸಮಾಜ ಕಲ್ಯಾಣ ಇಲಾಖೆ ವತಿಯಿಂದ 31.33 ಕೋಟಿ ಅನುದಾನ ವೆಚ್ಚದಲ್ಲಿ ಮೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ 01 ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳ ಸಂಕೀರ್ಣ ಕಟ್ಟಡಗಳ ಕಾಮಗಾರಿ ಪೂರ್ಣ ಗೊಂಡಿರುತ್ತದೆ.
  2. ಜಿಲ್ಲೆಯಲ್ಲಿ ಒಟ್ಟು 17 ಕೋಟಿ ವೆಚ್ಚದಲ್ಲಿ ಏಳು ವಿದ್ಯಾರ್ಥಿಗಳ ವಸತಿ ನಿಲಯ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿವೆ.

Yadgir

  1. ಯಾದಗಿರಿ ನಗರದಲ್ಲಿ 8.60 ಕೋಟಿ ರೂಪಾಯಿ ವೆಚ್ಚದಲ್ಲಿ 3 ಎಕರೆ ಪ್ರದೇಶದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣ.
  2. ಯಾದಗಿರಿ ಜಿಲ್ಲೆಗೆ 2013-14 ಸಾಲಿನಿಂದ 2016-17 ನೇ ಸಾಲಿನ ವರೆಗೆ ಒಟ್ಟು 1057 ಕಾಮಗಾರಿಗಳನ್ನು ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಮೈಕ್ರೋ & ಮ್ಯಾಕ್ರೋ ಯೋಜನೆಯಡಿಯಲ್ಲಿ ಮಂಜೂರಾಗಿದ್ದು, ಈ 1057 ಕಾಮಗಾರಿಗಳಲ್ಲಿ 596 ಕಾಮಗಾರಿಗಳು ಪೂರ್ಣಗೊಂಡಿದ್ದು 333 ಕಾಮಗಾರಿಗಳು ಪ್ರಗತಿಯಲ್ಲಿರುತ್ತದೆ.

#NavaKarnatakaNirmana

DRN9NiQVQAAJsRJ

WhatsApp-Image-2017-12-17-at-2.43.43-PM

WhatsApp-Image-2017-12-17-at-2.43.50-PM

WhatsApp-Image-2017-12-17-at-2.43.52-PM

WhatsApp-Image-2017-12-17-at-2.43.54-PM

Please click here to see Taluk Wise Development Data

ಈ ವೀಡಿಯೋ ವೀಕ್ಷಿಸಿ